
ಮಾನ್ವಿ:ಪಟ್ಟಣದ ಧ್ಯಾನ ಮಂದಿರದಲ್ಲಿ ಜಯನಗರ ಶ್ರೀ ಬಸವೇಶ್ವರ ಯುವಕ ಸಂಘದ ಸದಸ್ಯರು ಕಳೆದ ಮೂರು ದಿನಗಳಿಂದ ವಿಘ್ನನಿವಾರಕನಾದ ವಿನಾಯಕನನ್ನು ಭಕ್ತಿ ಭಾವದಿಂದ ಪೂಜಿಸಿ ನಂತರ ಮೂರನೆಯ ದಿನದ ವಿಸರ್ಜನೆ ವೇಳೆ ಗಣೇಶ ಮೂರ್ತಿಗೆ ಶಾಸ್ತೊçÃಕ್ತವಾಗಿ ಪೂಜೆ ಸಲ್ಲಿಸಿ ಮೋಸರಿನ ಬುತ್ತಿಯನ್ನು ಕಟ್ಟಿ ವಿವಿಧ ಭಜನಾ ತಂಡಗಳಿAದ ಗಣೇಶ ಸೇರಿದಂತೆ ಭಕ್ತಿಗೀತೆಗಳನ್ನು ,ಭಜನೆ ಪದಗಳನ್ನು ಹಾಗು ಗಣೇಶನ ಕುರಿತು ಒಡಪುಗಳನ್ನು ಹೇಳುತ್ತ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ಪಟ್ಟಣದ ಹಿರೇ ಬಾವಿಯಲ್ಲಿ ಗಣೇಶನ ವಿಸರ್ಜನೆ ಮಾಡಲಾಯಿತು.
ಇಂದಿನ ದಿನಗಳಲ್ಲಿ ಗಣೇಶನ ವಿಸರ್ಜನೆ ವೇಳೆ ಯುವಕರ ಗುಂಪು ಕರ್ಕಶವಾಗಿ .ಡಿಜೆ ಸದ್ದಿನೊಂದಿಗೆ ಮದ್ಯದ ಅಮಲಿನಲ್ಲಿ ಆಶ್ಲಿಲಾ ಹಾಡುಗಳಿಗೆ ನೃತ್ಯಮಾಡುತ್ತ ಸಾರ್ವಜನಿಕರಿಗೆ ಕಿರಿಕಿರಿ ಮಾಡುತ್ತಿರುವ ಸಮಯದಲ್ಲಿ ಶ್ರೀ ಬಸವೇಶ್ವರ ಯುವಕ ಸಂಘದ ಯುವ ಸದಸ್ಯರು ಮಾದರಿ ನಡೆ ಎಲ್ಲಾರ ಮೆಚ್ಚುಗೆ ಪಡೆದಿದೆ.