
ಕೊಪ್ಪಳ: ಜಿಲ್ಲೆಯ ಕುಷ್ಟಗಿ ತಾಲೂಕಿನ ಚಳಿಗೇರಾ ಗ್ರಾಮ ಒನ್ ಕೇಂದ್ರ ಆಯ್ಕೆ ಪ್ರಕ್ರಿಯೆಯಲ್ಲಿ ರಾಜಕೀಯ ವ್ಯಕ್ತಿಗಳ ಹಸ್ತಕ್ಷೇಪ ನಡೆದಿದೆ ಎಂದು ಚನ್ನಸಂಗನಗೌಡ ಮಾಲಿಪಾಟೀಲ ಚಳಿಗೇರಾ ಆರೋಪಿಸಿದ್ದಾರೆ.
ಅವರು ಜು.27 ಭಾನುವಾರ ಕುಷ್ಟಗಿ ಪಟ್ಟಣದಲ್ಲಿ ಪತ್ರಿಕಾ ಪ್ರಕಟಣೆ ನೀಡಿ ಮಾತನಾಡಿದರು.
ಸರ್ಕಾರದ ಯೋಜನೆಗಳನ್ನು ಸಾರ್ವಜನಿಕರಿಗೆ ವೇಗವಾಗಿ ಅವರಿಗೆ ತಲುಪಿಸಬೇಕು, ಕಚೇರಿ ಅಲೆದಾಟ ತಪ್ಪಿಸಬೇಕು ಎಂಬ ಸದುದ್ದೇಶದಿಂದ ಸರ್ಕಾರ ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಆನ್ ಲೈನ್ ತಂತ್ರಾಂಶಗಳ ಮೂಲಕ ಅರ್ಜಿ ಸಲ್ಲಿಸಲು ಕರ್ನಾಟಕ ಒನ್, ಗ್ರಾಮ ಒನ್ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಇಂತಹ ಕೇಂದ್ರ ಸ್ಥಾಪನೆ ಮಾಡುವ ಸಂದರ್ಭದಲ್ಲಿ ಅಭ್ಯರ್ಥಿ ಆಯ್ಕೆ ಪ್ರಕ್ರಿಯೆಯಲ್ಲಿ ರಾಜಕೀಯ ವ್ಯಕ್ತಿಗಳ ಹಸ್ತಕ್ಷೇಪ ನಡೆಸುತ್ತಿರುವುದು ಪ್ರತಿಭಾವಂತರಿಗೆ ಅಪಮಾನ ಮಾಡುತ್ತಿರುವುದು ನಾಚಿಕೆಗೇಡಿನ ಸಂಗತಿ.
ಕುಷ್ಟಗಿ ತಾಲೂಕಿನ ಚಳಿಗೇರಾ ಗ್ರಾಮ ಪಂಚಾಯಿತಿ ಕೇಂದ್ರ ಸ್ಥಾನದಲ್ಲಿ ಗ್ರಾಮ ಒನ್ ಕೇಂದ್ರಕ್ಕೆ ಫೆಬ್ರವರಿ ತಿಂಗಳಲ್ಲಿ ಅರ್ಜಿ ಕರೆಯಲಾಗಿತ್ತು, ಸದರಿ ಕೇಂದ್ರ ಪ್ರಾರಂಭಿಸಲು ನಾನು ಸೇರಿದಂತೆ ಐದು ಜನರು ಅರ್ಜಿ ಸಲ್ಲಿಸಿದ್ದೇವು, ಅದಕ್ಕೆ ಸಂಬಂಧಿಸಿದಂತೆ ಸ್ಥಳ ಪರಿಶೀಲನೆ ಚಟುವಟಿಕೆ ನಡೆಸಿದ ಸಂಬಂಧ ಪಟ್ಟ ಅಧಿಕಾರಿಗಳು ಎಂ.ಬಿ.ಎ ಪದವಿದರ ಅಷ್ಟೇ ಅಲ್ಲದೆ ಹತ್ತು ವರ್ಷಗಳ ಕಂಪ್ಯೂಟರ್ ಜ್ಞಾನ ಹೊಂದಿರುವ ನನ್ನನ್ನು ಪರಿಗಣಿಸಿಲ್ಲ, ಮತ್ತು ಇತರೆ ಇಬ್ಬರು ಪದವಿದರ ಅಭ್ಯರ್ಥಿಗಳನ್ನು ಪರಿಗಣಿಸದೆ, ರಾಜಕೀಯ ವ್ಯಕ್ತಿಗಳ ಮಾತಿಗೆ ಬೆಲೆ ಕೊಟ್ಟು ಪಿಯುಸಿ ಮುಗಿಸಿದ ವ್ಯಕ್ತಿ ಆಯ್ಕೆ ಮಾಡುವ ಮೂಲಕ, ಚಳಿಗೇರಾ ಗ್ರಾಮ ಒನ್ ಕೇಂದ್ರ ಪ್ರಕ್ರಿಯೆಯಲ್ಲಿ ನಿಯಮಗಳನ್ನು ಗಾಳಿಗೆ ತೂರಿದ್ದು, ಅದನ್ನು ಸರಿಪಡಿಸದೆ ಇದ್ದರೆ ಸಂಬಂಧ ಪಟ್ಟ ಇಲಾಖೆಯ ಮುಂದೆ ತಾಲೂಕಿನ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಅಹೋರಾತ್ರಿ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳುತ್ತೇನೆ ಎಂದರು.