ಮಾನ್ವಿ: ಪಟ್ಟಣದ ಪೊಲೀಸ್ ಠಾಣೆಯಲ್ಲಿ ಚಿಲ್ಡ್ರನ್ ಇಸ್ಲಾಮಿಕ್ ಆರ್ಗನೈಜೇಷನ್ ಆಫ್ ಇಂಡಿಯಾ ಸಂಯೋಗದಲ್ಲಿ ಶಾಲಾ ಮಕ್ಕಳು ಭಾಗವಹಿಸಿ ಮನೆಗೊಂದು ಮರ ಎಂಬಂತೆ ಜಾಗೃತಿ ಮೂಡಿಸಿ ಪೊಲೀಸ್ ಠಾಣೆಯಲ್ಲಿ ಗಿಡ ನೀಡಲಾಯಿತು.
ಸಿಐಒ ಜಿಲ್ಲಾಧ್ಯಕ್ಷೆ ನಾಜೀಯ ಬೇಗಂ ಮಾತನಾಡಿ, ಚಿಲ್ಡ್ರನ್ಸ್ ಇಸ್ಲಾಮಿಕ್ ಆರ್ಗನೈಜೇಷನ್ ಆಫ್ ಇಂಡಿಯಾ ಸಂಘಟನೆಯು ಮಕ್ಕಳ ರಾಷ್ಟ್ರೀಯ ಸಂಘಟನೆಯಾಗಿದ್ದು ಸಂಸ್ಥೆಯು 5 ರಿಂದ 12 ವರ್ಷ ವಯಸ್ಸಿನ ಮಕ್ಕಳಿಗಾಗಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಮಕ್ಕಳಲ್ಲಿನ ಪ್ರತಿಭೆಯನ್ನು ಹೊರತರುವುದೆ ನಮ್ಮ ಉದ್ದೇಶವಾಗಿದೆ ಎಂದರು. ಜುಲೈ 26 ರವರೆಗೆ ಮಣ್ಣಿನಲ್ಲಿ ಕೈಗಳು ಭಾರತದೊಂದಿಗೆ ಹೃದಯಗಳು ಹೆಸರಿನಲ್ಲಿ ಪರಿಸರ ಸಂರಕ್ಷಣೆಯ ಕಾರ್ಯಕ್ರಮ ನಡೆಸಲಾಗುತ್ತಿದೆ. ಪಟ್ಟಣದ ವಿವಿಧ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಆರಾಧನೆ ಸ್ಥಳಗಳಗಳಲ್ಲಿ ಮಕ್ಕಳು ಗಿಡಗಳನ್ನು ನೆಟ್ಟರು. ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮಕ್ಕಳಿಂದ ಪರಿಸರ ಜಾಗೃತಿ ಜಾಥ ನಡೆಯಿತು.
