
ಮಾನ್ವಿ: ಉಪಾಧ್ಯಕ್ಷೆಯಾಗಿದ್ದ ಮೀನಾಕ್ಷಿ ಡಿ.ರಾಮಕೃಷ್ಣ ಅವರು ಸರ್ವಾನುಮತ ಸದಸ್ಯರ ಬೆಂಬಲದಿಂದ ಅಧ್ಯೆಕ್ಷೆಯಾಗಿ ಅಧಿಕಾರ ಸ್ವೀಕರಿಸಿದರು.
ರಾಯಚೂರು ಜಿಲ್ಲೆಯ ಮಾನ್ವಿ ಪುರಸಭೆಯಲ್ಲಿ ಲಕ್ಷ್ಮೀ ವೀರೇಶ ಅವರು ಹಿಂದುಳಿದ ಮೀಸಲಾತಿ ಅನ್ವಯದಂತೆ ಪುರಸಭೆ ಅಧ್ಯಕ್ಷೆಯಾಗಿ ಅಧಿಕಾರ ಸ್ವೀಕರಿಸಿ 11 ತಿಂಗಳು ಸೇವೆ ಸಲ್ಲಿಸಿದ್ದಾರೆ. ಲಕ್ಷ್ಮಿ ವೀರೇಶ ಅವರಿಗೆ ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆಯಲ್ಲಿ ಧೀರ್ಘಾವಧಿ ರಜೆಯ ಕಾರಣ ನೀಡಿ ಪುರಸಭೆ ಮುಖ್ಯಾಧಿಕಾರಿ ಪರಶುರಾಮ ದೇವಮಾನೆ ಅವರಿಗೆ ರಾಜಿನಾಮೆ ಪತ್ರ ಸಲ್ಲಿಸಿದ್ದರು.
ಹಿರಿಯ ಪುರಸಭೆ ಸದಸ್ಯೆ ಲಕ್ಷ್ಮಿದೇವಿನಾಯಕ ಮಾತನಾಡಿ, ಕಾಂಗ್ರೆಸ್ ಪಕ್ಷದಲ್ಲಿ ನಿಷ್ಠಾವಂತರಾಗಿ ಯಾರು ಕೆಲಸ ಮಾಡುತ್ತಾರೆಂದು ಹಿರಿಯ ಧುರಿಣರು ಗಮನಿಸುತ್ತಿರುತ್ತಾರೆ.
ಕಾಂಗ್ರೆಸ್ ಪಕ್ಷದಲ್ಲಿ ನಾವು ಸಂಘಟನೆಯಾಗಿ ದುಡಿದಾಗ ಮಾತ್ರ ಅಧಿಕಾರ ಅನ್ನೋದು ಸಿಕ್ಕೆ ಸಿಗುತ್ತದೆ.ಹಾಗಾಗಿ ಲಕ್ಷ್ಮಿ ವೀರೇಶ ಅವರಿಗೆ ಆರೋಗ್ಯ ಸಮಸ್ಯೆ ಕಾರಣ ನೀಡಿ ದೀರ್ಘಾವಧಿ ರಜೆ ಹಾಕಿದ್ದರಿಂದ ಇನ್ನೂ ಮೂರು ತಿಂಗಳು ಅಧಿಕಾರ ಇರುವ ಕಾರಣ ಉಪಾಧ್ಯಕ್ಷೆಯಾಗಿದ್ದ ಮೀನಾಕ್ಷಿ ರಾಮಕೃಷ್ಣ ಅವರು ಅಧ್ಯಕ್ಷೆಯಾಗಿ ಅಧಿಕಾರ ಸ್ವೀಕರಿಸಿದ್ದಾರೆ ಎಂದರು.