ಅಜಯ್ ಕುಮಾರ್, ಒಬ್ಬ ಮಾಜಿ ರಕ್ಷಣಾ ಇಲಾಖೆ ನಿರ್ದೇಶಕರು, ಈಗ ಯೂನಿಯನ್ ಪಬ್ಲಿಕ್ ಸರ್ವೀಸ್ ಕಮಿಷನ್ ನ ಅಧ್ಯಕ್ಷರಾಗಿ ನೇಮಕವಾಗಿದ್ದಾರೆ. ಅವರನ್ನು ಯುಪಿಎಸ್‌ಸಿ ಅಧ್ಯಕ್ಷರಾಗಿ ನೇಮಕ ಮಾಡಿ ಕೇಂದ್ರ ಸಿಬ್ಬಂದಿ ಸಚಿವಾಲಯ ಮೇ 13 ರಂದು ಆದೇಶಿಸಿದೆ. ಅವರ ಬಗ್ಗೆ ನೀವು ತಿಳಿಯಬೇಕಾದ ಹಲವು ಮಾಹಿತಿಗಳು ಇಲ್ಲಿವೆ.
- ಯುಪಿಎಸ್‌ಸಿ ಹೊಸ ಅಧ್ಯಕ್ಷರು ಯಾರು?
- ಅಜಯ್ ಕುಮಾರ್ ಯಾರು? ಅವರ ಸೇವೆಗಳ ಇತಿಹಾಸವೇನು?
- ಈ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ.
ಕೇಂದ್ರ ಸಿಬ್ಬಂದಿ ಸಚಿವಾಲಯವು ಕೇಂದ್ರ ಲೋಕಸೇವಾ ಆಯೋಗ – ಯುಪಿಎಸ್‌ಸಿ’ಯ ಹೊಸ ಅಧ್ಯಕ್ಷರಾಗಿ ಮಾಜಿ ರಕ್ಷಣಾ ಕಾರ್ಯದರ್ಶಿ ಅಜಯ್ ಕುಮಾರ್ ರವರನ್ನು ನೇಮಕ ಮಾಡಿ ಆದೇಶಿಸಿದೆ. ಮೇ 13 ರಂದು ಅವರನ್ನು ಈ ಸೇವೆಗೆ ನೇಮಕ ಮಾಡಿ ಪ್ರಕಟಣೆ ಹೊರಡಿಸಿದೆ. ಏಪ್ರಿಲ್ 29 ರಂದು ಪ್ರೀತಿ ಸುದಾನ್ ರವರ ಅಧಿಕಾರಾವಧಿ ಪೂರ್ಣಗೊಂಡ ನಂತರ ಅಜಯ್ ಕುಮಾರ್ ಅವರನ್ನು ನೇಮಿಸಲಾಗಿದೆ.