ರಾಜ್ಯ ಕಂಡ ದಕ್ಷ ಪ್ರಾಮಾಣಿಕ ಐಪಿಎಸ್ ಅಧಿಕಾರಿ ರವಿ ಡಿ ಚೆನ್ನಣ್ಣವರ: ವೀರೇಶ ವಾಲ್ಮೀಕಿ

ಗದಗ: ನಗರದ ಶ್ರೀ ವೀರೇಶ್ವರ ಪುಣ್ಯಾಶ್ರಮದಲ್ಲಿ ಕರುನಾಡ ಸಿಂಗಂ ಖ್ಯಾತಿಯ ಬೆಂಗಳೂರಿನ
ಅಗ್ನಿಶಾಮಕ ಹಾಗೂ ತುರ್ತುಸೇವೆಗಳ- ಡಿ ಐ ಜಿ ಪಿ ರವಿ.ಡಿ.ಚೆನ್ನಣ್ಣವರ ಅವರ 40ನೇ ವರ್ಷದ ಹುಟ್ಟು ಹಬ್ಬಅಂಗವಾಗಿ ವೀರೇಶ್ವರ ಪುಣ್ಯಾಶ್ರಮದಲ್ಲಿ ಗದ್ದುಗೆಗೆ ಮಹಾರುದ್ರಾಭೀಷೇಕ ಮಾಡಿಸುವದರೊಂದಿಗೆ ಕೇಕ ಕತ್ತರಿಸಿ, ಮಹಾಪ್ರಸಾದ ವಿತರಿಸುವುದರೊಂದಿಗೆ ವಿಶೇಷ ವಾಗಿ ಆಚರಣೆ ಮಾಡಲಾಯಿತು.
ಈ ವೇಳೆ ವೀರೇಶ ವಾಲ್ಮೀಕಿ ಮಾತನಾಡಿ ಜಿಲ್ಲೆಯ ಹೆಮ್ಮೆಯ ಮಗ ರವಿ ಡಿ ಚೆನ್ನಣ್ಣವರ ಹುಟ್ಟುಹಬ್ಬವನ್ನು ಅವರ ಅಭಿಮಾನಿಗಳದಿಂದ ಆಚರಣೆ ಮಾಡುತ್ತಿದ್ದು,ರಾಜ್ಯ ಕಂಡ ದಕ್ಷ ಪ್ರಾಮಾಣಿಕ ಐ ಪಿ ಎಸ್ ಅಧಿಕಾರಿ ಯಾಗಿದ್ದು ಬಡಕೃಷಿ ಕುಟುಂಬದ ಕಠಿಣ ಹಾದಿಯಲ್ಲಿ ಬೆಳೆದು ಬಂದು ರಾಜ್ಯವೆ ಮೆಚ್ಚುವ ರೀತಿಯಲ್ಲಿ ಕೆಲಸ ಮಾಡುತ್ತಿದ್ದು ಅವರಲ್ಲಿ ರುವ ಧೈರ್ಯ ಶೃದ್ದೆ ಅವರ ಅಭಿಮಾನಿ ಗಳಿಗೆ ಮಾದರಿ ಯಾಗಬೇಕು ಎಂದು ಹೇಳಿದರು. ಈ ಸಂದರ್ಭದಲ್ಲಿ ಸಮಾಜ ಸೇವಕ ಅನಿಲ ಸಿದ್ದಮ್ಮನಹಳ್ಳಿ,ಮುಂಡರಗಿ ತಾಲೂಕು ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಲಕ್ಷ್ಮಣ ಪೂಜಾರ,ಗುರುನಾಥ ದೇಶಪಾಂಡೆ,ಶ್ರೀಕಾಂತ ಪೂಜಾರ,ಪತ್ರಕರ್ತರಾದ ಲೋಕೇಶ ಮಲ್ಲಿಗವಾಡ, ಗದಗ ಜಿಲ್ಲೆಯ 108 ಅಂಬುಲೆನ್ಸ್ ವ್ಯವಸ್ಥಾಪಕರಾಗಿರುವ ಶ್ರೀನಿವಾಸ, ಮುಂದಲಮನಿ ಈರಣ್ಣ ಕುರಿ,ಈರಣ್ಣ ಅಕ್ಕಿ, ಮಹಾಂತೇಶ, ಇಮಾಮ್ ಡಂಬಳ್ ರಾಹುಲ್, ತೇಜಪ್ಪ,ಬಿ ಡಿ.ಮಾದರ ಸೇರಿದಂತೆ ಅವರ ಅಪಾರ ಅಭಿಮಾನಿ ಬಳಗ ದವರು ಉಪಸ್ಥಿತರಿದ್ದರು.–