Jobs In Bengaluru : ಕರ್ನಾಟಕ ಗವರ್ನಮೆಂಟ್ ಫ್ಲೈಯಿಂಗ್ ಟ್ರೈನಿಂಗ್ ಸ್ಕೂಲ್ – ಜಿಎಫ್‌ಟಿಎಸ್ ಅಗತ್ಯ ಇರುವ ಸೇಫ್ಟಿ ಮ್ಯಾನೇಜರ್, ಫ್ಲೈಟ್ ಇನ್‌ಸ್ಟ್ರಕ್ಟರ್, ಉಪ ಮುಖ್ಯ ವಿಮಾನ ಬೋಧಕರು , ಮುಖ್ಯ ವಿಮಾನ ಬೋಧಕರು ಹುದ್ದೆಗಳ ಭರ್ತಿಗೆ ಅರ್ಜಿ ಕರೆದಿದೆ. ಅರ್ಜಿಗೆ ಮೇ 23 ರವರೆಗೆ ಅವಕಾಶ ನೀಡಲಾಗಿದೆ. ಆಸಕ್ತರು ಅಂಚೆ ಅಥವಾ ಇಮೇಲ್ ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಬೇಕಾದ ವಿಳಾಸ ಇಲ್ಲಿ ನೀಡಲಾಗಿದೆ.
- ಜಿಎಫ್‌ಟಿಎಸ್ ಕರ್ನಾಟಕ ನೇಮಕಾತಿ 2025.
- ವಿವಿಧ ಹುದ್ದೆಗೆ ಅರ್ಜಿ ಆಹ್ವಾನ.
- ಅರ್ಜಿಗೆ ಮೇ 23 ಕೊನೆ ದಿನ.
ಬೆಂಗಳೂರಿನಲ್ಲಿನ ಸರ್ಕಾರಿ ವೈಮಾನಿಕ ತರಬೇತಿ ಶಾಲೆಯು ವಿವಿಧ ಹುದ್ದೆಗಳ ಭರ್ತಿಗೆ ನೇಮಕ ಪ್ರಕಟಣೆ ಬಿಡುಗಡೆ ಮಾಡಿದೆ. ಮುಖ್ಯ ವಿಮಾನ ಬೋಧಕರು, ಉಪ ಮುಖ್ಯ ವಿಮಾನ ಬೋಧಕರು, ಫ್ಲೈಟ್ ಇನ್‌ಸ್ಟ್ರಕ್ಟರ್, ಸೇಫ್ಟಿ ಮ್ಯಾನೇಜರ್ ಹುದ್ದೆಗಳನ್ನು ಗುತ್ತಿಗೆ ಆಧಾರದ ಮೇಲೆ ಭರ್ತಿ ಮಾಡಲು ಅರ್ಹರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಹುದ್ದೆಗಳ ವಿವರಗಳನ್ನು ಕೆಳಗಿನಂತೆ ತಿಳಿದು, ಆಸಕ್ತರು ಅರ್ಜಿ ಸಲ್ಲಿಸಿ.