ಭಾರತ ಸರ್ಕಾರದ ಜವಳಿ ಸಚಿವಾಲಯ ಅಧೀನದ ಸೆಂಟ್ರಲ್ ಸಿಲ್ಕ್ ಬೋರ್ಡ್ ನಿರ್ದೇಶನದಲ್ಲಿ ಕೆಲಸ ಮಾಡುವ ಸೆಂಟ್ರಲ್ ಸಿಲ್ಕ್ ಟೆಕ್ನಾಲಾಜಿಕಲ್ ರಿಸರ್ಚ್ ಸಂಸ್ಥೆ ಇದೀಗ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ವಿವಿಧ ಪದನಾಮ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಕರೆತಿದೆ. ರಾಮನಗರ, ಧಾರವಾಡ, ಚಿಕ್ಕಬಳ್ಳಾಪುರದ ಈ ಸಂಸ್ಥೆಗಳಲ್ಲಿ ನೇಕಾರರು, ಡೈಯರ್ಸ್, ಮಾಸ್ಟರ್ ರೀಲರ್ಸ್, ತಂತ್ರಜ್ಞರು ಪೋಸ್ಟ್ ಗಳನ್ನು ನೇಮಕ ಮಾಡಲು ಸಂದರ್ಶನಕ್ಕೆ ಆಹ್ವಾನಿಸಲಾಗಿದೆ.
- ಸಿಎಸ್‌ಬಿ ಬೋರ್ಡ್‌ನಿಂದ ನೇಮಕಾತಿ.
- ವಿವಿಧ ಪದನಾಮ ಹುದ್ದೆಗಳಿಗೆ ನೇರ ಸಂದರ್ಶನ.
- ಒಟ್ಟು 60 ಹುದ್ದೆಗಳಿವೆ. ಆಸಕ್ತರು ಸಂದರ್ಶನದಲ್ಲಿ ಪಾಲ್ಗೊಳ್ಳಿ.
ಸೆಂಟ್ರಲ್ ಸಿಲ್ಕ್ ಬೋರ್ಡ್ ಅಧೀನದಲ್ಲಿ ಕಾರ್ಯನಿರ್ವಹಿಸುವ ಸೆಂಟ್ರಲ್ ಸಿಲ್ಕ್ ಟೆಕ್ನಾಲಾಜಿಕಲ್ ರಿಸರ್ಚ್ ಸಂಸ್ಥೆಯು ನೇಮಕಾತಿ ಪ್ರಕಟಣೆ ಬಿಡುಗಡೆ ಮಾಡಿದೆ. ಸಿಲ್ಕ್ ಸಮಗ್ರ 2 ಯೋಜನೆ ಅಡಿಯಲ್ಲಿ ಜೂನ್ 2025 ರಿಂದ ಮಾರ್ಚ್ 2026 ರವರೆಗೆ 10 ತಿಂಗಳ ಅವಧಿಗೆ ಅಥವಾ ಗುತ್ತಿಗೆ ಆಧಾರದ ಮೇಲೆ ವಿವಿಧ 60 ಹುದ್ದೆ ನೇಮಕ ಮಾಡಲು ಉದ್ದೇಶಿಸಿದೆ.