
ಕೊಟ್ಟೂರು: ಪಟ್ಟಣದ ಮಹಾತ್ಮಾ ಗಾಂಧೀಜಿ ವೃತ್ತದಲ್ಲಿ ಕೇಬಲ್ ಅಳವಡಿಕೆಗೆ ಶನಿವಾರ ಚಾಲನೆ ನೀಡಿ ಮಾತನಾಡಿದ ಅವರು, ಪಟ್ಟಣದ ರಥ ಬೀದಿಯ ಎರಡೂ ಬದಿಯಲ್ಲಿ ಹಾದು ಹೋಗಿರುವ ವಿದ್ಯುತ್ ಮಾರ್ಗದಲ್ಲಿ ಸದ್ಯ ತಂತಿಗಳಿವೆ. ಇದರಿಂದ ರಥ ಸಾಗುವ ವೇಳೆ ಅಪಾಯ ವಾಗುವ ಸಾಧ್ಯತೆಗಳಿವೆ. ಅಲ್ಲದೇ ಕೆಲ ಕಡೆ ಕಟ್ಟಡಗಳಿಗೆ ಹತ್ತಿರದಲ್ಲಿ ವಿದ್ಯುತ್ ಲೈನ್ ಇದೆ. ಈ ಹಿನ್ನೆಲೆಯಲ್ಲಿ ಪಟ್ಟಣ ವ್ಯಾಪ್ತಿಯೊಳಗೆ ಎಲ್ಲ ಮಾರ್ಗ ದಲ್ಲಿತಂತಿ ಬದಲು 80 ಲಕ್ಷ ರೂ.ಗಳಲ್ಲಿ ಕೇಬಲ್ ಅಳವಡಿಕೆ ಮಾಡಲಾಗುತ್ತಿದೆ. ಸದ್ಯ 5 ಕಿಮೀ ಉದ್ದದ ಕೇಬಲ್ ಅಳವಡಿಕೆ ಮಾಡಲಾಗುತ್ತಿದ್ದು, ಇನ್ನೂ 10 ಕಿಮೀ ಉದ್ದದ ಕೇಬಲ್ ಅಳವಡಿಸಲು ಕ್ರಮ ಕೈಗೊಳ್ಳಲಾಗುತ್ತದೆ ಎಂದರು.
ಕೊಟ್ಟೂರು ಪಟ್ಟಣ ಅಭಿವೃದ್ಧಿಗೆ ವಿವಿಧ ಯೋಜನೆಗಳನ್ನು ಹಾಕಿ ಕೊಂಡಿದೆ. ಅಭಿವೃದ್ಧಿಗೂ ಮೊದಲು ಯಾವುದನ್ನೂ ಹೇಳಲು ಬಯಸುವುದಿಲ್ಲ ಶೀಘ್ರದಲ್ಲಿ 15 ಕೋಟಿ ರೂ. ಗಳಲ್ಲಿ ಅಭಿವೃದ್ಧಿ
ಕಾರ್ಯ ಕ್ಕೆ ಚಾಲನೆ ನೀಡುತ್ತೇನೆ ಎಂದರು.
ಕೊಟ್ಟೂರು ಸೇರಿ ಕ್ಷೇತ್ರ 17ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಸಂಬಂ ಧಿಸಿದಂತೆ ಕೇಂದ್ರ ನೀರಾವರಿ ಸಚಿವರಿಗೆ 500 ಕೋಟಿ ರೂ.ಗಳಿಗೂ ಹೆಚ್ಚು ಅಂದಾಜು ವೆಚ್ಚದ ಪ್ರಸ್ತಾವನೆ ಸಲ್ಲಿಸಿ ದ್ದೇನೆ. ಕೇಂದ್ರ ಸಚಿವ ಎಚ್ .ಡಿ.ಕುಮಾರಸ್ವಾಮಿಯವರೂ ಶಿಫಾರಸ್ಸು ಮಾಡಿದ್ದಾರೆ. ಆದರೆ ಕೆರೆ ತುಂಬಿಸಲು ಕೇಂದ್ರದ ಅನುದಾನದಲ್ಲಿ ಶೇಕಡಾ 50ರಷ್ಟು ರಾಜ್ಯ ಸರ್ಕಾರ ಭರಿಸಬೇಕಾಗುತ್ತದೆ. ನಮ್ಮ ಪ್ರಸ್ತಾವನೆಗೆ
ಪೂರಕವಾಗಿ ಕೇಂದ್ರ ಸಚಿವರು ಸ್ಪಂದಿಸಿದ್ದಾರೆ.
ಕೇಂದ್ರದಿಂದ ಈ ಯೋಜನೆ ಕುರಿತು ರಾಜ್ಯ ಸರ್ಕಾರಕ್ಕೆ ಪತ್ರ ಬರೆಯಲಾಗುತ್ತದೆ. ರಾಜ್ಯ ಸರ್ಕಾರ ಯೋಜನೆಗೆ ಸ್ಪಂದಿಸಿ ಶೇ.50ರಷ್ಟು ಹಣ ಮಂಜೂರುಮಾಡುವುದಾಗಿ ತಿಳಿಸಿದರೆ, ಕೇಂದ್ರದಿಂದ ಅನುದಾನ ಮಂಜೂರು ಮಾಡಿ ಕಾಮಗಾರಿಗೆ ಒಪ್ಪಿಗೆ ಸಿಗಲಿದೆ. ರಾಜ್ಯ ಸರ್ಕಾರ ಅನುದಾನ ನೀಡುವ ನಿರೀಕ್ಷೆಯಲ್ಲಿದ್ದೇವೆ ಎಂದರು.
ಜಿಪಂ ಮಾಜಿ ಸದಸ್ಯ ಎಂಎಂಜೆ ಹರ್ಷವರ್ಧನ್, ವೈ.ಮಲ್ಲಿಕಾರ್ಜುನ, ಜೆಡಿಎಸ್ ಮುಖಂಡ ಬಾದಾಮಿ ಮುತ್ತಣ್ಣ ಯುವ ಮುಖಂಡ ಎಂಎಂಜೆ ಶೋಭಿತ್, ಪಪಂಸದಸ್ಯ ಬಿ.ಶಿವಾನಂದ, ಜೆಸ್ಕಾಂ ಎಇಇ ನಾಗರಾಜ, ಎಇ ಚೇತನ್, ವಾಲ್ಮೀಕಿ ಮುಖಂಡರಾದ ಫಕ್ಕೀರಪ್ಪ ಸೈಫುಲ್ಲಾ ವಿಜಯನಗರ ಕೊಟ್ರೇಶ, ರುದ್ರಮುನಿ, ಅಯ್ಯನಹಳ್ಳಿ ಕೊಟ್ರಯ್ಯ, ಶೇರಗಾರ ವೆಂಕಟೇಶ, ಮಂದಾರ ಮಂಜು ಉಪಸ್ಥಿತರಿದ್ದರು