
ಶಾಸಕ ಹಂಪಯ್ಯ ನಾಯಕ ಪುತ್ರ ಶಿವರಾಜ ನಾಯಕರಿಂದ ಆರೋಗ್ಯ ವಿಚಾರಣೆ
ಮಾನ್ವಿ: ಕ್ಷೇತ್ರದ ಕಡ್ಡೋಣಿ ತಿಮ್ಮಾಪುರ ಗ್ರಾಮದಲ್ಲಿ ಚೌಳೆ ಕಾಯಿ ಪಲ್ಯ ತಿಂದು ಒಂದೇ ಕುಟುಂಬದ ಇಬ್ಬರು ಮಕ್ಕಳು ತಂದೆ ಸಾವನಪ್ಪಿದ್ದು, ಇನ್ನುಳಿದ ಇಬ್ಬರು ಮಕ್ಕಳು ತೀವ್ರ ಅಸ್ವಸ್ಥರಾಗಿ ರಾಯಚೂರಿನ ರಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹಿನ್ನೆಲೆಯಲ್ಲಿ ಮಾನ್ವಿ ಶಾಸಕ ಹಂಪಯ್ಯ ನಾಯಯ ಪುತ್ರ ಶಿವರಾಜ ನಾಯಕ ಭೇಟಿ ನೀಡಿ ಆರೋಗ್ಯ ವಿಚಾರಿಸಿ 5 ಸಾವಿರ ರುಪಾಯಿ ಪರಿಹಾರ ನೀಡಿದರು.
ಇತ್ತೀಚೆಗೆ ಹೊಲದಲ್ಲಿ ಬೆಳೆದ ಚೌಳೆಕಾಯಿಯನ್ನು ಕೀಳಿಕೊಂಡು ಮನೆಯಲ್ಲಿ ಕುಟುಂಬವು ಊಟ ಮಾಡಿದ ನಂತರ ರಾತ್ರಿ ವೇಳೆ ಮಕ್ಕಳು ಸೇರಿದಂತೆ ಹಿರಿಯರಿಗೆ ಹೊಟ್ಟೆ ನೋವು ಪ್ರಾರಂಭವಾಗಿ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾದರು ಇಬ್ಬರು ಮಕ್ಕಳು ಸೇರಿದಂತೆ ಹಿರಿಯ ಜೀವಿ ಸಾವನ್ನಪ್ಪಿದ್ದಾನೆ.
ಶಾಸಕ ಹಂಪಯ್ಯ ನಾಯಕ ಪುತ್ರ ಶಿವರಾಜ ನಾಯಕ ಮಾತನಾಡಿ, ತಾಯಿ ಪದ್ಮ ಮತ್ತು ಮಕ್ಕಳಾದ ಕೃಷ್ಣ ಮತ್ತು ಚೈತ್ರಾರ ಆರೋಗ್ಯದಲ್ಲಿ ಸುಧಾರಣೆಯಾಗಿದೆ ಎಂದು ವೈದ್ಯರು ತಿಳಿಸಿದ್ದು, ಹೆಚ್ಚಿನ ಚಿಕಿತ್ಸೆಯ ಬಗ್ಗೆ ಅಗತ್ಯ ಬಂದರೆ ಮಾಹಿತಿ ನೀಡುವಂತೆ ಸೂಚಿಸಿದ್ದೇನೆ ಮಾಧ್ಯಮದವರಿಗೆ ತಿಳಿಸಿದ್ದಾರೆ.