
ಗಂಗಾವತಿ : ಸತತ ಅಧ್ಯಯನ ಹಾಗೂ ಶಿಸ್ತು ಯಶಸ್ಸಿಗೆ ಭದ್ರ ಬುನಾದಿ . ನಿರಂತರ ಪರಿಶ್ರಮ, ಶೃದ್ಧೆ, ಏಕಾಗ್ರತೆಯಿಂದ ಸತತ ಪ್ರಯತ್ನ ನಿಮಗೆ ಉತ್ತಮ ಫಲ ನೀಡುತ್ತದೆ. ಓದು ನಮ್ಮ ವ್ಯಕ್ತಿತ್ವದ ಸದೃಢತೆ, ಸುಂದರತೆ ಗೆ ಕಾರಣವಾಗುತ್ತದೆ.ಓದು ನಾವಂದುಕೊಂಡದ್ದನ್ನು ಸಾಧಿಸಲು ಪೂರಕವಾಗುತ್ತದೆ. ನಿರಂತರ ಓದು ಆತ್ಮವಿಶ್ವಾಸ, ಧೈರ್ಯ, ನಿರ್ಭಯತೆಯನ್ನು ತರುತ್ತದೆ.ಉನ್ನತ ಶಿಕ್ಷಣದಲ್ಲಿ ಸಾಧಿಸಲು ಸಾಕಷ್ಟು ಅವಕಾಶಗಳಿವೆ.ನಾವು ಗುಣಾತ್ಮಕ ಚಿಂತನೆಯಿಂದ ಸಾಧನೆಯ ಪಥದಲ್ಲಿ ಸಾಗಬೇಕು.ಕೀಳರಿಮೆಯನ್ನು ದೂರ ಮಾಡಬೇಕು ” ಎಂದು ಶ್ರೀ ಕೊಲ್ಲಿ ನಾಗೇಶ್ವರರಾವ್ ಗಂಗಯ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ಡಾ.ಮುಮ್ತಾಜ್ ಬೇಗಂ ಇವರು ಹೇಳಿದರು.ಅವರು ಇಂದು ಸ್ನಾತಕೋತ್ತರ ಕನ್ನಡ ಅಧ್ಯಯನ ವಿಭಾಗ ದ ವತಿಯಿಂದ ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಸಭೆಯಲ್ಲಿ ಗುಂಡೂರು ಪವನ್ ಕುಮಾರ್,ಡಾ.ಬಸವರಾಜ ಗೌಡನ ಬಾವಿ, ಡಾ.ಪಾಗುಂಡಪ್ಪ, ಡಾಶ್ರೀಶೈಲ ಪೂಜಾರ, ಡಾ.ಜೆ.ಎಂ.ಶಿಲ್ಪಾ, ಡಾ.ಉಷಾರಾಣಿ, ರಾಮಾಂಜನೇಯ, ಮಾತನಾಡಿದರು. ಜೆ.ಆರ್.ಎಫ್-ನೆಟ್ ಪರೀಕ್ಷೆಯಲ್ಲಿ ಪಾಸಾದ ಸುಮಾ ಹೊರಪೇಟೆಯವರನ್ನು ಸನ್ಮಾನಿಸಲಾಯಿತು. ಸ್ವಾಗತ ಮಲ್ಲಿಕಾರ್ಜುನ, ವಂದನಾರ್ಪಣೆ ಭುವನೇಶ್ವರಿ, ನಿರೂಪಣೆ ಸುಧಾ ನೆರವೇರಿಸಿದರು.