
ಮಾನ್ವಿ: ತಾಲೂಕಿನ ತುಂಗ ಭದ್ರಾ ನದಿಯದ ಪಾತ್ರದ ದದ್ದಲ್ ಗ್ರಾಮ ಸಂಪರ್ಕ್ ರಸ್ತೆ ತೀರಾ ಹದಗೆಟ್ಟಿದ್ದು ತಗ್ಗು ದಿನ್ನೆಗಳಿಂದ ಕೂಡಿದ್ದು ಪ್ರಸ್ತುತ ಮಳೆಗಾಲ ದಿಂದಾಗಿ ರಸ್ತೆಯು ಸಂಪೂರ್ಣ ವಾಗಿ ಕೆಸರು ಗದ್ದೆಯಂತಾಗಿದ್ದು ಕೂಡಲೇ ಶಾಸಕರು ಹಾಗೂ ಅಧಿಕಾರಿಗಳು ರಸ್ತೆ ಡಾಂಬರೀಕರಣಕ್ಕೆ ಮುಂದಾಗಬೇಕುಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ ಮಾನ್ವಿ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಗೆ ಒಂದು ಒಳಪಡುತ್ತದ್ದರೂ ಕೂಡ ದದ್ದಲ್ ಗ್ರಾಮವನ್ನು ಸಂಪರ್ಕಿಸುವ ಮೂರು ಕಿಮೀ ರಸ್ತೆಯು ಕಳೆದ 30 ವರ್ಷಗಳಿಂದ ಡಾಂಬರೀಕರಣ ಕಾಣದೆ ರಸ್ತೆಯ ಸ್ಥಿತಿ ಅಧೋಗತಿಗೆ ತಲುಪಿರುವುದು ವಿಷಾದನೀಯ ಸಂಗತಿಯಾಗಿದೆ ರಸ್ತೆ ತೀರಾ ಹದಗೆಟ್ಟಿದ್ದು ತಗ್ಗು ದಿನ್ನೆಗಳಿಂದ ಕೂಡಿದ್ದು ಪ್ರಸ್ತುತ ಮಳೆಗಾಲ ದಿಂದಾಗಿ ರಸ್ತೆಯು ಸಂಪೂರ್ಣವಾಗಿ ಕೆಸರು ಗದ್ದೆಯಂತಾಗಿದ್ದು ಗ್ರಾಮಸ್ಥರು ಸಂಚಾರಕ್ಕೆ ನಿತ್ಯ ತೊಂದರೆಯನ್ನು ಅನುಭವಿಸುತ್ತಿದ್ದಾರೆ ಕಾತರಿಕಿ ಗ್ರಾಮದಿಂದ ಕೇವಲ ಮೂರು ಕಿಮೀ ರಸ್ತೆಯನ್ನು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಅಭಿವೃದ್ಧಿ ಪಡಿಸಿದೆ ಕಡಗಣಿಸಿಲಾಗಿದೆ ಎಂಬ ಗಂಭೀರ ಆರೋಪಗಳನ್ನು ಗ್ರಾಮಸ್ಥರು ಮಾಡುತ್ತಿದ್ದಾರೆ ಗ್ರಾಮದಿಂದ ನಿತ್ಯ ನೂರಾರು ವಿದ್ಯಾರ್ಥಿಗಳು ಶಾಲೆಯ ಕಾಲೇಜುಗಳಿಗೆ ಈ ರಸ್ತೆ ಮೂಲಕ ಸಂಚಾರ ಮಾಡಬೇಕಾದ್ದು ರಸ್ತೆ ಹದಗೆಟ್ಟಿದ್ದು ರಿಂದ ಕೆಲವು ಬಾರಿ ಬಸ್ ಕೂಡ ಬರಲ್ಲ ಎಂಬುದು ವಿದ್ಯಾರ್ಥಿಗಳು ಅಳಲಾಗಿದೆ