ಯೂನಿಯನ್ ಪಬ್ಲಿಕ್ ಸರ್ವೀಸ್ ಕಮಿಷನ್ 2025 ನೇ ಸಾಲಿನ ಪೂರ್ವಭಾವಿ ಪರೀಕ್ಷೆಯ ಅಡ್ಮಿಟ್ ಕಾರ್ಡ್ ಅನ್ನು ಬಿಡುಗಡೆ ಮಾಡಿದೆ. ಈ ಪರೀಕ್ಷೆ ತೆಗೆದುಕೊಂಡ ಅಭ್ಯರ್ಥಿಗಳು ಈಗ ತಮ್ಮ ಪರೀಕ್ಷಾ ಹಾಲ್ ಟಿಕೆಟ್ ಅನ್ನು ಅಭ್ಯರ್ಥಿಗಳ ಲಾಗಿನ್‌ನಲ್ಲಿ ಡೌನ್‌ಲೋಡ್ ಮಾಡಿಕೊಳ್ಳಬಹುದು. ಮೇ 25 ರಂದು ಈ ಪರೀಕ್ಷೆ ನಿಗದಿ ಮಾಡಲಾಗಿದೆ.
ಹೈಲೈಟ್ಸ್:
- ಯುಪಿಎಸ್‌ಸಿ ಸಿಎಸ್‌ಇ ಪ್ರಿಲಿಮ್ಸ್ ಅಡ್ಮಿಟ್ ಕಾರ್ಡ್ ಪ್ರಕಟ.
- ಡೌನ್‌ಲೋಡ್ ಮಾಡಲು ಲಿಂಕ್, ವಿಧಾನ ಇಲ್ಲಿದೆ.
- ಮೇ 25 ರಂದು ಪ್ರಿಲಿಮ್ಸ್ ಪರೀಕ್ಷೆ.
ಕೇಂದ್ರ ಲೋಕಸೇವಾ ಆಯೋಗವು ಇದೀಗ ಮೇ 25 ರಂದು ನಿಗದಿ ಮಾಡಿರುವ 2025ನೇ ಸಾಲಿನ ನಾಗರೀಕ ಸೇವೆಗಳ ಪರೀಕ್ಷೆ ಸಂಬಂಧಿತ ಪೂರ್ವಭಾವಿ ಪರೀಕ್ಷೆಗೆ ಅಭ್ಯರ್ಥಿಗಳ ಪ್ರವೇಶ ಪತ್ರವನ್ನು ಬಿಡುಗಡೆ ಮಾಡಿದೆ. ಈ ಪರೀಕ್ಷೆಗೆ ಅರ್ಜಿ ಹಾಕಿರುವ ಅಭ್ಯರ್ಥಿಗಳು ಇದೀಗ ತಮ್ಮ ಇ ಅಡ್ಮಿಟ್ ಕಾರ್ಡ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ.