ಯುಪಿಎಸ್‌ಸಿ ಪರೀಕ್ಷೆಗೆ ಓದಲು ಸಲಹೆಗಳನ್ನು ನೀಡಿರುವ ಸಿಎಸ್‌ಇ AIR 32 ರ‍್ಯಾಂಕರ್ ಅವ್ಧೇಶ್ ಮೀನಾ ರವರು ತಮ್ಮ ಅಧ್ಯಯನ ಹೇಗಿತ್ತು, ಓದಿದ ಪುಸ್ತಕಗಳು ಯಾವುವು, ಮುಖ್ಯ ಪರೀಕ್ಷೆಗೆ ಆಯ್ಕೆ ಮಾಡಿದ ವಿಷಯ, ಅದು ಹೇಗೆ ಸಹಾಯವಾಯಿತು, ರಿವಿಷನ್ ಎಷ್ಟು ಮುಖ್ಯ, ತಾವು ಎಷ್ಟು ಬಾರಿ ರಿವಿಷನ್ ಮಾಡಿದ್ದು, ಹೀಗೆ ಹತ್ತು ಹಲವು ವಿಷಯಗಳನ್ನು ಹಂಚಿಕೊಂಡಿದ್ದಾರೆ. ನೀವು ಸಿವಿಲ್ ಸೇವೆಗಳ ಪರೀಕ್ಷೆ ಬರೆಯುವವರಾಗಿದ್ದಲ್ಲಿ ಈ ಸ್ಟೋರಿ ಓದಿಕೊಳ್ಳಿ.
- ಅವ್ಧೇಶ್ ಮೀನಾ ಸ್ಟಡಿ ಸ್ಟ್ರಾಟೆಜಿ ಹೇಗಿತ್ತು?
- ಯುಪಿಎಸ್‌ಸಿ ಪರೀಕ್ಷೆಗೆ ರಿವಿಷನ್ ಎಷ್ಟು ಮುಖ್ಯ?
- ಈ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ ನೋಡಿ.
ಭಾರತದ ಅತ್ಯುನ್ನತ ನಾಗರಿಕ ಸೇವೆಗಳಾದ ಐಎಎಸ್, ಐಪಿಎಸ್, ಐಎಫ್‌ಎಸ್, ಐಇಎಸ್, ಐಎಸ್‌ಎಸ್, ಇಎಸ್‌ಇ, ಹೀಗೆ ಯಾವುದೇ ಪರೀಕ್ಷೆಗಳನ್ನು ಪಾಸ್ ಮಾಡಬೇಕು ಎಂದರೆ, ಋಷಿಯಂತೆ ತಪ್ಪಸ್ಸಿನ ಗುಣ ಅಳವಡಿಸಿಕೊಂಡು ಓದಿದರೆ ಯಶಸ್ಸು ಖಂಡಿತ. ಹಾಗಂದ ಮಾತ್ರಕ್ಕೆ ಸುಮ್ಮನೆ ಓದುವುದು ಸರಿಯಲ್ಲ. ಈಗಾಗಲೇ ಇಂತಹ ಪರೀಕ್ಷೆಗಳಲ್ಲಿ ಸಾಧನೆ ಮಾಡಿದ, ಹೆಚ್ಚು ಅಂಕಗಳನ್ನು ಗಳಿಸಿದ ಟಾಪರ್‌ಗಳ ಓದಿನ ತಂತ್ರಗಾರಿಕೆ ಹೇಗಿತ್ತು, ಅವರು ಎಷ್ಟನೇ ರ‍್ಯಾಂಕ್‌ನಲ್ಲಿ ಪಾಸಾದ್ರು, ಎಷ್ಟು ಪ್ರಯತ್ನಗಳಲ್ಲಿ ಪಾಸಾದ್ರು ಎಂಬುದನ್ನು, ಹಾಗೆಯೇ ಅವರು ಹೇಳಿದ ಸಲಹೆಗಳನ್ನು ನಮ್ಮ ನಮ್ಮ ಅನುಕೂಲಗಳಿಗೆ ತಕ್ಕಂತೆ ಅಳವಡಿಸಿಕೊಂಡು, ಫಾಲೋ ಮಾಡುವ ಮೂಲಕ ಗುರಿ ಮುಟ್ಟುವುದು ಒಳಿತು. ಆದ್ದರಿಂದ ಪ್ರತಿವರ್ಷವು ಸಹ ಸಾಧಕರ ಸಂದರ್ಶನಗಳನ್ನೂ ಓದುವುದು ಉತ್ತಮ.