
ಕನಕಗಿರಿ: ಇಲ್ಲಿನ ಶಾಸಕರ ಮಾದರಿಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕರ್ನಾಟಕ ಸರಕಾರ. ಬಾಲ ಭವನ ಸೊಸೈಟಿ ಬೆಂಗಳೂರ. ಜಿಲ್ಲಾ ಪಂಚಾಯತ್ ಕೊಪ್ಪಳ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಕೊಪ್ಪಳ. ಶಾಲಾ ಶಿಕ್ಷಣ ಮತ್ತು ಸಾಕ್ಷಾರತ ಇಲಾಖೆ ಕೊಪ್ಪಳ ಹಾಗು ಶಿಶು ಅಭಿವೃದ್ದಿ ಯೋಜನಾಧಿಕಾರಿ ಇವರ ಸಂಯುಕ್ತ ಆಶ್ರಯದಲ್ಲಿ ೬ರಿಂದ೧೬ ವರ್ಷ ವಯಸ್ಸಿನ ವಿದ್ಯಾರ್ಥಿಗಳಿಗೆ” ಮಕ್ಕಳ ಕಲಿಕೋತ್ಸವ ” ಕಾರ್ಯಕ್ರಮ ಜರುಗಿತು. ದೀಪ ಬೆಳಗುವುದರ ಮೂಲಕ ಶ್ರೀಮತಿ ವಿಜಯಲಕ್ಷ್ಮಿ ಮಾತನಾಡಿ ವಿದ್ಯಾರ್ಥಿಗಳ ಪಠ್ಯದ ಹೊರತಾಗಿ ಇಂತಹ ಅನೇಕ ಕಾರ್ಯಕ್ರಮಗಳನ್ನು ನಮ್ಮ ಇಲಾಖೆ ಹಮ್ಮಿಕೊಂಡು ಯಶಸ್ವಿಯಾಗಿದೆ ಎಂದರು. ಕಾರ್ಯಕ್ರಮದ ಪ್ರಾಸ್ತವಿಕ ನುಡಿಯನ್ನು ಬಾಲಭವನ ಸೊಸೈಟಿಯ ಕೊಪ್ಪಳ ಜಿಲ್ಲಾ ಸಂಯೋಜಕ ಮಹಿಬೂಬ್ ಇಲಾಹಿ ಕಾರ್ಯಕ್ರಮದ ರೂಪುರೆಷೆಗಳನ್ನು ವಿವರಿಸಿದರು.
ಮುಖ್ಯ ಅತಿಥಿ ರಾಜೀವ್ ಮಾತನಾಡಿ ನಮ್ಮ ವಿದ್ಯಾರ್ಥಿ ಗಳಿಗೆ ಅನೇಕ ಚಟುವಟಿಕೆ ಗಳನ್ನು ಮಾಡಲು ಉತ್ತೇಜನ ನೀಡಿದಂತಾಗುತ್ತದೆ ಎಂದರು. ವಿದ್ಯಾರ್ಥಿಗಳಿಗೆ ನೃತ್ಯ. ಜಾನಪದ ಗಾಯನ. ವಿಜ್ಞಾನ ವಸ್ತು ಪ್ರದರ್ಶನ. ಮ್ಯೂಸಿಕಲ್ ಚೇರ್ ಚಟುವಟಿಕೆ ಗಳನ್ನು ಏರ್ಪಡಿಸಲಾಗಿತ್ತು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಇಲಾಖೆವತಿಯಿಂದ ಸರ್ಟಿಫಿಕೇಟ ನೀಡಿದರು.